ವಿಷಯಕ್ಕೆ ಹೋಗು

ವಿಶಾಖಪಟ್ನಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಶಾಖಪಟ್ಟಣಂ
ವಿಶಾಖಪಟ್ಟಣಂ ನಗರದ ಪಕ್ಷಿನೋಟ
ವಿಶಾಖಪಟ್ಟಣಂ ನಗರದ ಪಕ್ಷಿನೋಟ
ವಿಶಾಖಪಟ್ಟಣದ ಪಕ್ಷಿನೋಟ

ವಿಶಾಖಪಟ್ಟಣಂ
ರಾಜ್ಯ
 - ಜಿಲ್ಲೆ
ಆಂಧ್ರ ಪ್ರದೇಶ
 - ವಿಶಾಖಪಟ್ಟಣ
ನಿರ್ದೇಶಾಂಕಗಳು 17.42° N 83.15° E
ವಿಸ್ತಾರ 208.5 km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ

 - 6,884.2/sq mi/ಚದರ ಕಿ.ಮಿ.
ಮೇಯರ್

ವಿಶಾಖಪಟ್ಟಣ ಆಂಧ್ರ ಪ್ರದೇಶ ರಾಜ್ಯದ ಒಂದು ಕರಾವಳಿ ನಗರ ಹಾಗೂ ರೇವು ಪಟ್ಟಣ. ವಿಶಾಖಪಟ್ಟಣ ಜಿಲ್ಲಾಕೇಂದ್ರ. ಭಾರತದ ಪೂರ್ವ ಕರಾವಳಿಯಲ್ಲಿರುವ ಈ ನಗರದ ಪಶ್ಚಿಮಕ್ಕೆ ಪೂರ್ವ ಘಟ್ಟಗಳು ಹಾಗೂ ಪೂರ್ವಕ್ಕೆ ಬಂಗಾಳ ಕೊಲ್ಲಿಯಿದೆ. ವೈಜಾಗ್ ಎಂಬ ಹೆಸರಿನಿಂದನೂ ಕರೆಯಲ್ಪಡುವ ಇದು ಆಂಧ್ರಪ್ರದೇಶದ ದೊಡ್ಡ ನಗರಗಳಲ್ಲಿ ಒಂದಾಗಿದ್ದು ವಾಣಿಜ್ಯ ರಾಜಧಾನಿಯಾಗಿದೆ.[] ಇದು ಭಾರತೀಯ ಕೋಸ್ಟ್ ಗಾರ್ಡ್ ನ ರಾಜ್ಯ ಪ್ರಧಾನ ಕಾರ್ಯಸ್ಥಾನವಾಗಿದೆ.[] ೨೦೧೧ರ ಜನಗಣತಿ ಪ್ರಕಾರ ಇದು ೨,೦೩೫,೯೨೨ ಜನಸಂಖ್ಯೆ ಹೊಂದಿದ್ದು ದೇಶದಲ್ಲಿ ೧೪ನೇ ಸ್ಥಾನದಲ್ಲಿದೆ.

ಈ ಪಟ್ಟಣದ ಇತಿಹಾಸವು ಕ್ರಿಸ್ತಪೂರ್ವದ ವರೆಗೂ ಇದ್ದು ಕಳಿಂಗ ರಾಜ್ಯದ ಭಾಗವಾಗಿತ್ತು. ನಂತರ ವೆಂಗಿ, ಪಲ್ಲವ, ಪೂರ್ವ ಗಂಗ ಸಾಮ್ರಾಜ್ಯಗಳಿಗೆ ಸೇರಿತ್ತು.[] ವಾಸ್ತುದಾಖಲೆಗಳ ಪ್ರಕಾರ ಈಗಿನ ಪಟ್ಟಣವು ೧೧ ಮತ್ತು ೧೩ನೇ ಶತಮಾನದ ಕಾಲದಲ್ಲಿ ಚೋಳ ಹಾಗೂ ಗಜಪತಿ ಸಾಮ್ರಾಜ್ಯಗಳ ತಿಕ್ಕಾಟದ ಅವಧಿಯಲ್ಲಿ ಕಟ್ಟಲ್ಪಟ್ಟಿತು.[][] ಅನಂತರ ೧೫ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವು ವಶಪಡಿಸಿಕೊಂಡಿತು. ೧೬ನೇ ಶತಮಾನದಲ್ಲು ಮೊಘಲ್ ಸಾಮ್ರಾಜ್ಯಕ್ಕೆ ಸೇರಿ ಅನಂತರ ಯುರೋಪಿಯನ್ ದೇಶಗಳು ವ್ಯಾಪಾರಾಸಕ್ತಿ ಚಟುವಟಿಕೆಗಳ ನೆಲೆಯಾಯಿತು. ೧೮ನೇ ಶತಮಾನದ ಕೊನೆಯ ವೇಳೆಗೆ ಇದು ಫ್ರೆಂಚರ ಆಳ್ವಿಕೆಗೆ ಒಳಪಟ್ಟಿತು. ೧೮೦೪ರಿಂದ ೧೯೪೭ರ ಭಾರತದ ಸ್ವಾತಂತ್ರ್ಯದವರೆಗೆ ಬ್ರಿಟಿಶರ ಆಳ್ವಿಕೆಗೆ ಒಳಪಟ್ಟಿತ್ತು.

ಈ ನಗರವು ಅತಿಹಳೆಯ ಹಡಗುನೆಲೆ ಹಾಗೂ ಪೂರ್ವಕರಾವಳಿಯ ನೈಸರ್ಗಿಕ ಬಂದರನ್ನು ಹೊಂದಿದೆ.[] ಭಾರತೀಯ ನೌಕಾಸೇನೆಯ ಪೂರ್ವ ಕಮಾಂಡ್ ನ ಹಾಗೂ ಪೂರ್ವಕರಾವಳಿ ರೈಲ್ವೆ ವಲಯದ ಪ್ರಧಾನ ಕಛೇರಿಗಳು ಇಲ್ಲಿವೆ.


ಉಲ್ಲೇಖಗಳು

[ಬದಲಾಯಿಸಿ]
  1. "Administration-AP-Financial Capital". Visakhapatnam. 29 ಏಪ್ರಿಲ್ 2015. Archived from the original on 22 ಡಿಸೆಂಬರ್ 2015. Retrieved 13 ಆಗಸ್ಟ್ 2015. {{cite news}}: Unknown parameter |dead-url= ignored (help)
  2. Academy, Students'. Visakhapatnam-The City of Destiny-India (in ಇಂಗ್ಲಿಷ್). Lulu.com. p. 4. ISBN 978-1-257-06510-3. Retrieved 16 May 2017.
  3. "Visakhapatnam District". Visakhapatnam District. Archived from the original on 7 ಮೇ 2015. Retrieved 9 ಮೇ 2015. {{cite web}}: Unknown parameter |dead-url= ignored (help)
  4. "Maps of India – Visakhapatnam History". Maps of India. Archived from the original on 26 ಫೆಬ್ರವರಿ 2010. Retrieved 9 ಮೇ 2015. {{cite web}}: Unknown parameter |dead-url= ignored (help)
  5. "History Of Visakhapatnam". I Love India. Archived from the original on 18 ಮೇ 2015. Retrieved 9 ಮೇ 2015. {{cite web}}: Unknown parameter |dead-url= ignored (help)
  6. Gopalakrishnan, Hema (7 November 2012). "A career in Vizag". The Hindu. Retrieved 18 May 2015.