ವಿಷಯಕ್ಕೆ ಹೋಗು

ಚಲಾವಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪದದ ಅತ್ಯಂತ ನಿರ್ದಿಷ್ಟ ಬಳಕೆಯಲ್ಲಿ ಚಲಾವಣೆ ವಾಸ್ತವಿಕ ಬಳಕೆಯಲ್ಲಿದ್ದಾಗ ಯಾವುದೇ ರೂಪದಲ್ಲಿನ ಹಣವನ್ನು ಸೂಚಿಸುತ್ತದೆ, ವಿಶೇಷವಾಗಿ ನೋಟುಗಳನ್ನು ಮತ್ತು ನಾಣ್ಯಗಳನ್ನು. ಚಲಾವಣೆಯು (ನಾಣ್ಯಪದ್ಧತಿ) ಸಾಮಾನ್ಯ ಬಳಕೆಯಲ್ಲಿನ, ವಿಶೇಷವಾಗಿ ಒಂದು ದೇಶದಲ್ಲಿ ಬಳಕೆಯಲ್ಲಿರುವ, ಒಂದು ಹಣದ ವ್ಯವಸ್ಥೆ ಎನ್ನುವುದು ಹೆಚ್ಚು ಸಾಮಾನ್ಯ ವ್ಯಾಖ್ಯಾನ. ಅಮೇರಿಕದ ಡಾಲರ್, ಬ್ರಿಟನ್‍ನ ಪೌಂಡ್, ಯೂರೋಪ್‍ನ ಯೂರೊ, ಭಾರತದ ರೂಪಾಯಿ ಚಲಾವಣೆಯ ಉದಾಹರಣೆಗಳು. ಈ ವಿವಿಧ ಚಲಾವಣೆಗಳು ಮೌಲ್ಯದ ಮಾನ್ಯಮಾಡಿದ ಸಂಗ್ರಹಗಳಾಗಿವೆ ಮತ್ತು ದೇಶಗಳ ನಡುವೆ ವಿದೇಶಿ ವಿನಿಮಯ ಮಾರುಕಟ್ಟೆಗಳಲ್ಲಿ ವಿನಿಮಯ ಮಾಡಲ್ಪಡುತ್ತವೆ. ಈ ಮಾರುಕಟ್ಟೆಗಳು ವಿಭಿನ್ನ ಚಲಾವಣೆಗಳ ತುಲನಾತ್ಮಕ ಮೌಲ್ಯಗಳನ್ನು ನಿರ್ಧರಿಸುತ್ತವೆ. ಈ ಅರ್ಥದಲ್ಲಿ, ಚಲಾವಣೆಗಳನ್ನು ಸರ್ಕಾರಗಳು ವ್ಯಾಖ್ಯಾನಿಸುತ್ತವೆ, ಮತ್ತು ಪ್ರತಿಯೊಂದು ಪ್ರಕಾರವು ಅಂಗೀಕಾರದ ಸೀಮಿತ ಗಡಿಗಳನ್ನು ಹೊಂದಿದೆ.

ಚಲಾವಣೆಯ ಬಳಕೆ ಕ್ರಿ.ಪೂ. ೨೦೦೦ ರ ವೇಳೆಗೆ ಆಗಿತ್ತು. ಮೂಲತಃ, ಹಣವು ಪಾವತಿಯ ರೂಪವಾಗಿತ್ತು, ಮತ್ತು ಮೊದಮೊದಲು ಧಾನ್ಯವನ್ನು ಹಣವಾಗಿ ಬಳಸಲಾಗುತ್ತಿತ್ತು.

ಚಲಾವಣೆಯ ಮೊದಲ ಹಂತದಲ್ಲಿ, ದ್ರವ್ಯಗಳ ರೂಪದಲ್ಲಿ ಸಂಗ್ರಹಿಸಲಾದ ಮೌಲ್ಯವನ್ನು ಪ್ರತಿನಿಧಿಸಲು ಲೋಹಗಳನ್ನು ಗುರುತುಗಳಾಗಿ ಬಳಸಲಾಗಿತ್ತು.